== ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು == ಅಂತರರಾಷ್ಟ್ರೀಯ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ () ಅಪಾಯದ ಅಂಚಿನಲ್ಲಿರುವ ಸಸ್ಯ, ಪ್ರಾಣಿ, ಹಕ್ಕಿ, ಕೀಟ ಮುಂತಾದ ಜೀವಿಗಳ ʼಕೆಂಪು ಪಟ್ಟಿʼಯನ್ನು ಕಾಲಕಾಲಕ್ಕೆ ಪುನವಿರ್ಮರ್ಶಿಸಿ ಬಿಡುಗಡೆ ಮಾಡುತ್ತಿರುತ್ತದೆ. ಇದರಲ್ಲಿ ಸೇರಿಸಲ್ಪಟ್ಟ ಜೀವಿಗಳ ಪ್ರದೇಶವಾರು ಹಂಚಿಕೆ, ಸಾಂದ್ರತೆ, ಆವಾಸ ಸ್ಥಾನ, ಸಂರಕ್ಷಣಾ ವಿಧಾನಗಳನ್ನು ವಿಸ್ತೃತವಾಗಿ ವಿವರಿಸಲ್ಪಟ್ಟಿರುತ್ತದೆ. ಇದನ್ನು ಅನುಸರಿಸಿ ಆಯಾ ದೇಶಗಳು ತಮ್ಮಲ್ಲಿರುವ ಅಪಾಯಕ್ಕೊಳಗಾದ ಜೀವಿಗಳ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಅವನ್ನು ಕಾರ್ಯ ರೂಪಕ್ಕೆ ಇಳಿಸುವ ಕಠಿಣ ಕ್ರಮ ಏನೇನೂ ಸಾಲದಾಗಿದೆ. 2022ರ ಅಗಸ್ಟ್ ತಿಂಗಳಲ್ಲಿ ಕಂಡಂತೆ ಕರ್ನಾಟಕದ 58 ಪ್ರಭೇದದ ಹಕ್ಕಿಗಳು ಈ ಕೆಂಪು ಪಟ್ಟಿಯಲ್ಲಿವೆ 2022. . ಇವುಗಳಲ್ಲಿ ಸ್ಥಳೀಯ ಹಕ್ಕಿಗಳು 31 ಹಾಗೂ ವಲಸೆ ಹಕ್ಕಿಗಳು 27. == ಉಲ್ಲೇಖಗಳು ==